Wednesday, December 29, 2010

ಕರ್ನಾಟಕದಲ್ಲಿ ಗಾಂಧೀ


'ಗಾಂಧೀ ಮತ್ತು ಕರ್ನಾಟಕ' ಎಂಬ ಗ್ರಂಥದ ಆಧಾರದ ಮೇಲೆ ಪ್ರೊ. ಎನ್. ಕೃಷ್ಣಸ್ವಾಮಿಯವರು 'ಕರ್ನಾಟಕದಲ್ಲಿ ಗಾಂಧೀ' ಎಂಬ ಲೇಖನವನ್ನು ಬರೆದಿದ್ದಾರೆ.
ಈ ಪ್ರಬಂಧದ ಸಾರಾಂಶವನ್ನು ಕೆಳಗೆ ಬರೆಯಲು ಪ್ರಯತ್ನಿಸಿದ್ದೇನೆ :


  • ಗಾಂಧೀಜಿ ಕರ್ನಾಟಕಕ್ಕೆ ಮೊದಲ ಬಾರಿ ಬಂದಿದ್ದು ೧೯೧೫ ರಲ್ಲಿ ಬೆಂಗಳೂರಿಗೆ.
  • ೧೯೨೪ ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ಸ್ ಅಧಿವೇಶನದ ಅಧ್ಯಕ್ಷರಾಗಿದ್ದರು.
  • ೧೯೨೭ ರಲ್ಲಿ ಖಾದಿ ಪ್ರಚಾರ ಪ್ರವಾಸ ಮಾಡುವಾಗ ಅವರ ಆರೋಗ್ಯ ಹದಗೆಟ್ಟಿದ್ದರಿಂದ, ನಂದಿ ಬೆಟ್ಟದಲ್ಲಿ ವಿಶ್ರಾಂತಿ ಪಡೆಯಲು ಮೈಸೂರು ಸರ್ಕಾರ ಅವರನ್ನು ಆಹ್ವಾನಿಸಿತ್ತು. ಅಲ್ಲಿ ಅವರ ದರ್ಶನಕ್ಕೆ ಬರುತ್ತಿದ್ದ ನೂರಾರು ಶಾಲಾ ಮಕ್ಕಳಿಗೂ, ಜನರಿಗೂ, ಖಾದಿಯ ಮಹತ್ವವನ್ನು ತಿಳಿಸುವ ಅವಕಾಶ ಗಾಂಧೀಜಿಗೆ ದೊರೆಯಿತು.
  • ಶಿವಮೊಗ್ಗದ ತುಂಗೆಯ ತೀರದಲ್ಲೂ ಅವರು ವಿಹರಿಸಿದ್ದಾರೆ. ಈ ಮಾಹಿತಿ ನನಗೆ ನಿಜಕ್ಕೂ ಖುಷಿ ತಂದಿದೆ.
  • ಗುಂಡುಕುಟ್ಟದಲ್ಲಿ ಗೌರಮ್ಮನ ಉಪವಾಸ ಸತ್ಯಾಗ್ರಹ, ಸಿದ್ದಾಪುರದ ಮಹಾದೇವಿಯ ಕಥೆ ನಿಜಕ್ಕೂ ಮೆಚ್ಚುವಂಥದ್ದು. ಕರ್ನಾಟಕದ ಹೆಣ್ಣುಮಕ್ಕಳ ತ್ಯಾಗ ಬುದ್ಧಿಯನ್ನು ನೋಡಿ 'ಈ ಜನರ ಔದಾರ್ಯಕ್ಕೆ ಪ್ರತಿಯಾಗಿ ನಾನೇನು ಕೊಡಬಲ್ಲೆ?' ಎಂದು ಪದೇ ಪದೇ ಹೇಳುತ್ತ್ತಿದ್ದರು.
  • ಗಾಂಧೀಜಿಯವರ ಸಹಾಯದಿಂದ ವಿಧವೆಯಾಗಿದ್ದ ಮಹಾದೇವಿಯು ವರ್ಧಾ ಆಶ್ರಮ ಸೇರಿ ಸೇವೆ ಸಲ್ಲಿಸುತ್ತಾಳೆ. ಮುಂದೆ ವಿನೋಬಾಜಿ ಅವರ ಸಾಕುಮಗಳಾಗಿ, ಅವರ ಭೂದಾನ ಯಾತ್ರೆಯಲ್ಲಿ ಮಹತ್ವದ ಪಾತ್ರವಹಿಸುತ್ತಾಳೆ. ಕೊನೆಗೆ ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಿದವಳೂ ಆಕೆಯೇ.
  • ಗಾಂಧೀಜಿಯವರ ಕಡೆಯ ಕರ್ನಾಟಕ ಪ್ರವಾಸ ಹುದಲಿಗೆ, ಗಾಂಧೀ ಸೇವಾ ಸಂಘದ ಸಮ್ಮೇಳನಕ್ಕಾಗಿ.
ಇದೆಲ್ಲದರಿಂದ ಗಾಂಧೀಜಿಗೂ ಕರ್ನಾಟಕಕ್ಕೂ ಒಂದು ವಿಶೇಷ ನಂಟು ಇತ್ತೆಂದು ತಿಳಿದುಬರುತ್ತದೆ.